ಡೆನಿಸ್, ಕ್ಲಾರನ್ಸ್ ಮೈಕೆಲ್ ಜೇಮ್ಸ್
1876-1938. ಆಸ್ಟ್ರೇಲಿಯದ ಕವಿ. ಹಲವು ವರ್ಷ ಕಾಲ ಪತ್ರಿಕೋದ್ಯಮದಲ್ಲಿ ಹೆಣಗಿದ. 1906ರಲ್ಲಿ ಮೆಲ್ಬೋರ್ನ್ ನಗರಕ್ಕೆ ಹೋದ. ಒಂದನೆಯ ಮಹಾಯುದ್ಧದ ಕಾಲದಲ್ಲಿ ಆಸ್ಟ್ರೇಲಿಯ ಸರ್ಕಾರದ ಸೇವೆಗೆ ಸೇರಿದ. 1922ರಿಂದ 1938ರ ವರೆಗೂ ಮೆಲ್ಬೋರ್ನ್ ಹೆರಲ್ಡ್ ಪತ್ರಿಕೆಯ ವರದಿಗಾರನಾಗಿದ್ದುಕೊಂಡು ಅದಕ್ಕೆ ಲೇಖನಗಳನ್ನು ಬರೆಯುತ್ತಿದ್ದ. ಈತನ ಕೃತಿಗಳು: 1. ಬ್ಯಾಕ್ ಬ್ಲಾಕ್ ಬ್ಯಾಲಡ್ಸ್ ಅಂಡ್ ಅದರ್ ವರ್ಸಸ್ (1913); 2. ದಿ ಸಾಂಗ್ಸ್ ಆಫ್ ಎ ಸೆಂಟಿಮೆಂಟಲ್ ಬ್ಲೋಕ್ (ಹೆನ್ರಿ ಲಾಸನ್ನನ ಮುನ್ನಡಿಯೊಡನೆ, 1915); 3. ದಿ ಆಸ್ಟ್ರೆಲೇಸ್: ಎ ಮಾರ್ಚಿಂಗ್ ಸಾಂಗ್ (1915); 4. ದಿ ಮುಡ್ಸ್ ಆಫ್ ಜಿಂಜರ್ ಮಿಕ್ (1916); 5. ದಿ ಬ್ಯಾಟಲ್ ಆಫ್ ದಿ ವಜಿûೀರ್ (1916); 6. ಡೋರೀನ್ (1917); 7. ದಿ ಗ್ಲಗ್ಸ್ ಆಫ್ ಗೋಷ್ (1917); 8. ಡಿಗ್ಗರ್ ಸ್ಮಿತ್ (1918); 9. ಬ್ಯಾಕ್ ಬ್ಲಾಕ್ ಬ್ಯಾಲಡ್ಸ್ ಅಂಡ್ ಲೇಟರ್ ವರ್ಸಸ್ (1918); 10. ಜಿಮ್ ಆಫ್ ದಿ ಹಿಲ್ಸ್: ಎ ಸ್ಟೋರಿ ಇನ್ ರ್ಹೈಮ್ (1919); 11. ಇನ್ ದಿ ಗಾರ್ಡನ್ ಆಫ್ ಏಡನ್: ಎ ಮೆರಿ-ಗೋ-ರೌಂಡ್ (1920); 12. ಎ ಬುಕ್ ಫಾರ್ ದಿ ಕಿಡ್ಸ್ (1921); 13. ರೋಸ್ ಆಫ್ ಸ್ಪಾಡ್‍ಜರ್ಸ್, ಎ ಸೀಕ್ವಲ್ ಟು ಜಿಂಜರ್ ಮಿಕ್ (1924); 14. ಐ ಡಿಪ್ಸ್ ಮಿ ಲಿಡ್ ಟು ದಿ ಸಿಡ್ನಿ ಹಾರ್ಬರ್ ಬ್ರಿಜ್ (1932); ಮತ್ತು ದಿ ಸಿಂಗಿಂಗ್ ಗಾರ್ಡನ್ (ಪ್ರೋಸ್ ಅಂಡ್ ವರ್ಸ್) (1935).
                                                                          (ಕೆ.ವಿ.ಎಸ್.ಟಿ.; ಎಲ್.ಎಸ್.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ